ವಿಐಪಿ ಸೆಲ್​​​​ನಿಂದ ಪ್ರಜ್ವಲ್​ ರೇವಣ್ಣ ಎತ್ತಂಗಡಿ – ಜೈಲಲ್ಲಿ ಸಿಕ್ಕ ಮೊಬೈಲ್​​ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ?

ಆಗಸ್ಟ್ 14, 2026 - 04:59
0 0

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ವೇಳೆ ಪ್ರಜ್ವಲ್ ರೇವಣ್ಣ ಬ್ಯಾರಕ್​ನಲ್ಲಿ ಮೊಬೈಲ್ ಪತ್ತೆಯಾಗಿರುವ ಪ್ರಕರಣವು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ದಿನದಿಂದ ದಿನಕ್ಕೆ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.

ಜೈಲಿನೊಳಗೆ ಸಿಕ್ಕಿದ ಮೊಬೈಲ್ ಬಗ್ಗೆ ತನಿಖೆ ಮುಂದುವರಿದಿದ್ದು, ಹಲವು ಅಚ್ಚರಿಯ ಮಾಹಿತಿಗಳು ಹೊರಬರುತ್ತಿವೆ. ಮೊಬೈಲ್‌ನಲ್ಲಿ ಕೆಲ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಇದರ ಜೊತೆಗೆ, ಪ್ರಜ್ವಲ್ ತಮ್ಮ ಪರಿಚಿತರೊಂದಿಗೆ ಮಾತನಾಡಿದ್ದಾರೆನ್ನಲಾದ ಆಡಿಯೋ ರೆಕಾರ್ಡ್ ಕೂಡ ಲಭ್ಯವಾಗಿದೆ.

ಮೊಬೈಲ್‌ ಪತ್ತೆಯಾದ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವಿಐಪಿ ಸೆಲ್‌ನಿಂದ (VIP Cell) ಪ್ರಜ್ವಲ್‌ ರೇವಣ್ಣನನ್ನ ಜನರಲ್‌ ಕೈದಿಗಳಿರುವ ಸೆಲ್‌ಗೆ ಎತ್ತಂಗಡಿ ಮಾಡಲಾಗಿದೆ. 20 ಕೈದಿಗಳಿರುವ ಬ್ಯಾರಕ್‌ಗೆ ಪ್ರಜ್ವಲ್‌ ರೇವಣ್ಣನನ್ನ ಶಿಫ್ಟ್‌ ಮಾಡಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ.

The post ವಿಐಪಿ ಸೆಲ್​​​​ನಿಂದ ಪ್ರಜ್ವಲ್​ ರೇವಣ್ಣ ಎತ್ತಂಗಡಿ – ಜೈಲಲ್ಲಿ ಸಿಕ್ಕ ಮೊಬೈಲ್​​ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ? first appeared on Freedom TV.

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0

ಕಾಮೆಂಟ್‌ಗಳು (0)

User