ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ!
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವರ ಖಾತೆ ಹಂಚಿಕೆ ಕಸರತ್ತು ಅಂತಿಮವಾಗಿ ತೆರೆಬಿದ್ದಿದೆ. ಸಿಎಂ ಡಿ.ಕೆ ಶಿವಕುಮಾರ್ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಅಧಿಕೃತ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಮುನಿಯಪ್ಪ ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಸಚಿವಾಲಯವನ್ನು ನೀಡಲಾಗಿದೆ. ಮುನಿಯಪ್ಪ ಅವರು ಸಮಾಜಕಲ್ಯಾಣ ಖಾತೆ ಬೇಕೇಂದು ಪಟ್ಟು ಹಿಡಿದಿದ್ದರು. ಅದರಂತೆ ಈಗ ಆ ಖಾತೆಯನ್ನೇ ಹಂಚಿಕೆ ಮಾಡಲಾಗಿದೆ.
ಯಾರಿಗೆ ಯಾವ ಖಾತೆ?
- ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ
- ಅಜಯ್ ಸಿಂಗ್ – ಅರಣ್ಯ ಇಲಾಖೆ
- ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
- ಲಕ್ಷ್ಮಣ ಸವದಿ – ಸಹಕಾರ ಇಲಾಖೆ
- ಕೆ.ಎಚ್. ಮುನಿಯಪ್ಪ – ಸಮಾಜ ಕಲ್ಯಾಣ ಇಲಾಖೆ
- ಜಮೀರ್ ಅಹ್ಮದ್ – ವಸತಿ ಇಲಾಖೆ
- ಹೆಚ್.ಸಿ. ಬಾಲಕೃಷ್ಣ – ಸಣ್ಣ ನೀರಾವರಿ
- ಪುಟ್ಟರಂಗಶೆಟ್ಟಿ – ಪಶುಸಂಗೋಪನೆ
- ಬಸವಂತಪ್ಪ – ಮೀನುಗಾರಿಕೆ, ಬಂದರು ಮತ್ತು ಒಳನಾಡು
- ಎಸ್.ಎಸ್. ಮಲ್ಲಿಕಾರ್ಜುನ್ – ಗಣಿ ಇಲಾಖೆ
- ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ
- ರಿಜ್ವಾನ್ ಅರ್ಷದ್ – ಆಹಾರ ಇಲಾಖೆ
- ಚಲುವರಾಯಸ್ವಾಮಿ – ಕೃಷಿ ಇಲಾಖೆ
The post ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ! first appeared on Freedom TV.
ನಿಮ್ಮ ಪ್ರತಿಕ್ರಿಯೆ ಏನು?
ಇಷ್ಟ
0
ಇಷ್ಟವಿಲ್ಲ
0
ಪ್ರೀತಿ
0
ತಮಾಷೆ
0
ವಾಹ್
0
ದುಃಖ
0
ಕೋಪಗೊಂಡ
0
ಕಾಮೆಂಟ್ಗಳು (0)