SIR ಮೊದಲ ಕರಡು ಮತದಾರರ ಪಟ್ಟಿ ರಿಲೀಸ್ – 1,07.96,339 ಮತದಾರರ ಹೆಸರು ಡಿಲೀಟ್!
ಬೆಂಗಳೂರು : ರಾಜ್ಯದಲ್ಲಿ ನಡೆಸಿದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪೂರ್ಣಗೊಂಡಿದ್ದು, ಮೊದಲ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಒಟ್ಟು 5,54,32,314 ಮತದಾರರಿದ್ದಾರೆ. 1,07,96,339 ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು. ಎಸ್‌ಐಆರ್‌ಗೆ 15,17,042 ಮಂದಿ ಗೈರಾಗಿದ್ದಾರೆ. 65,45,679 ಮತದಾರರು ಶಾಶ್ವತವಾಗಿ ಶಿಫ್ಟ್ ಆಗಿದ್ದಾರೆ. 16,39,864 ಮಂದಿ ಮೃತಪಟ್ಟಿದ್ದಾರೆ. 7,09,870 ಮಂದಿ ಒಂದಕ್ಕಿಂತ ಹೆಚ್ಚು ಮತದಾನ ಮಾಡಿದವರಾಗಿದ್ದಾರೆ. 3,83,884 ಮತದಾರರು ಇತರರಿದ್ದಾರೆ. 43,81,335 ಮತದಾರರಿಗೆ ನೋಟಿಸ್ ಕೊಡುವ ಪ್ರಕ್ರಿಯೆ ಜಾರಿಯಲ್ಲಿದೆ.
ಅಕ್ಟೋಬರ್ 22ರೊಳಗೆ ನೋಟಿಸ್ ಪ್ರಕ್ರಿಯೆ ಮುಗಿಸಲಾಗುತ್ತದೆ. ಮತದಾರರಿಗೆ ಖುದ್ದು ಮನೆಗೆ ಹೋಗಿ ನೋಟಿಸ್ ನೀಡಲಾಗುತ್ತದೆ. ಮೊಬೈಲ್ ಸಂದೇಶಗಳ ಮೂಲಕ ಕಳಿಸಲ್ಲ ಎಂದು ಮಾಹಿತಿ ನೀಡಿದ್ರು.
ಸೆಪ್ಟೆಂಬರ್ 23ರೊಳಗೆ ಫಾರ್ಮ್-6 ಸಲ್ಲಿಕೆ ಮಾಡಿದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇರುತ್ತದೆ ಎಂದ್ರು. ಇನ್ನು ಜೂನ್ 30ರಿಂದ ಆರಂಭವಾದ SIR ಮತದಾರರ ಪಟ್ಟಿ ಪರಿಷ್ಕರಣೆ ಆಗಸ್ಟ್ 17ಕ್ಕೆ ಪೂರ್ಣಗೊಂಡಿದೆ.
The post SIR ಮೊದಲ ಕರಡು ಮತದಾರರ ಪಟ್ಟಿ ರಿಲೀಸ್ – 1,07.96,339 ಮತದಾರರ ಹೆಸರು ಡಿಲೀಟ್! first appeared on Freedom TV.
ನಿಮ್ಮ ಪ್ರತಿಕ್ರಿಯೆ ಏನು?
ಇಷ್ಟ
0
ಇಷ್ಟವಿಲ್ಲ
0
ಪ್ರೀತಿ
0
ತಮಾಷೆ
0
ವಾಹ್
0
ದುಃಖ
0
ಕೋಪಗೊಂಡ
0
ಕಾಮೆಂಟ್‌ಗಳು (0)