ರೇಣುಕಾಸ್ವಾಮಿ ಕೇಸಲ್ಲಿ ದರ್ಶನ್‌ಗೆ ಸಂಕಷ್ಟ – ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ!

ಆಗಸ್ಟ್ 26, 2026 - 11:17
0 0

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ಅತಿದೊಡ್ಡ ಸಂಕಷ್ಟ ಎದುರಾಗಿದೆ. ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಅಂಗೀಕರಿಸಿದೆ.

ಆರೋಪಿ ಪ್ರದೋಷ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಪ್ರದೋಶ್ ಅರ್ಜಿಯನ್ನು ಅಂಗೀಕರಿಸಿದ್ದು ಪ್ರದೋಷ್​ನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದೆ. ಅಲ್ಲದೆ ಪ್ರದೋಷ್‌ಗೆ ಕೆಲ ಷರತ್ತು ವಿಧಿಸಿರುವ ಕೋರ್ಟ್, ಸಂಪೂರ್ಣ ಸತ್ಯಾಂಶ ಬಹಿರಂಗಪಡಿಸಬೇಕು. ಮುಚ್ಚಿಟ್ಟರೆ ಮಾಫಿ ಸಾಕ್ಷಿಯಿಂದ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಹೇಳಿದೆ.

ಇನ್ನು ಪ್ರಕ್ರಿಯೆ ಮುಗಿಯುವವರೆಗೂ ಪ್ರದೋಶ್ ಜೈಲಿನಲ್ಲಿಯೇ ಇರಬೇಕು. ಷರತ್ತು ಉಲ್ಲಂಘಿಸಿ ಸುಳ್ಳು ಸಾಕ್ಷಿ ಹೇಳಿದರೇ ಕೇಸ್ ದಾಖಲಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಇನ್ನು ಪವಿತ್ರಾ ಗೌಡ ಸೇರಿ ಪ್ರಕರಣದ ಉಳಿದ 16 ಮಂದಿಗೆ ಭಾರೀ ಸಂಕಷ್ಟ ಎದುರಾಗಿದೆ.

The post ರೇಣುಕಾಸ್ವಾಮಿ ಕೇಸಲ್ಲಿ ದರ್ಶನ್‌ಗೆ ಸಂಕಷ್ಟ – ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ! first appeared on Freedom TV.

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0

ಕಾಮೆಂಟ್‌ಗಳು (0)

User