ಎರಡನೇ ದಿನಕ್ಕೆ ಕಾಲಿಟ್ಟ ಬಿಡದಿ ಟೌನ್ಶಿಪ್ ವಿರುದ್ಧದ ಪಾದಯಾತ್ರೆ!
ರಾಮನಗರ : ಬಿಡದಿ ಟೌನ್ಶಿಪ್ ವಿರುದ್ಧ ಬಿಜೆಪಿ-ಜೆಡಿಎಸ್ ವತಿಯಿಂದ ನಿನ್ನೆ ಪಾದಾಯಾತ್ರೆ ಆರಂಭವಾಗಿದ್ದು, ಮೈತ್ರಿ ನಾಯಕರ ಪಾದಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದೆ. ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮುಂದುವರಿದಿರುವ ಈ ಹೋರಾಟಕ್ಕೆ ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಾಥ್ ನೀಡಿದ್ದಾರೆ.
ಇಂದು ದಳಪತಿಗಳು 16 ಕಿಲೋ ಮೀಟರ್ ಹೆಜ್ಜೆ ಹಾಕಲಿದ್ದು, ಬಿಡದಿಯಿಂದ ಮೈಸೂರು ರಸ್ತೆಯ ನೈಸ್ ಜಂಕ್ಷನ್ ವರೆಗೆ ಪಾದಾಯಾತ್ರೆ ನಡೆಸಲಿದ್ದಾರೆ. ಸಾವಿರಾರು ಕಾರ್ಯಕರ್ತರು, ರೈತರು ಹಾಗೂ ಮುಖಂಡರೊಂದಿಗೆ ಬೆಳಿಗ್ಗೆಯಿಂದಲೇ ಪಾದಯಾತ್ರೆ ಆರಂಭವಾಗಿದ್ದು, ಸರ್ಕಾರದ ರೈತ ವಿರೋಧಿ ಮತ್ತು ಟೌನ್ಶಿಪ್ ನೀತಿಗಳ ವಿರುದ್ಧ ಘೋಷಣೆಗಳು ಮೊಳಗುತ್ತಿವೆ.
ನಾಡಿನ ರೈತರ ಪರವಾಗಿ ಧ್ವನಿ ಎತ್ತಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು 2ನೇ ದಿನದ ಪಾದಯಾತ್ರೆಯಲ್ಲಿ ಭಾಗವಹಿಸಿ, ಯುವ ನಾಯಕರಿಗೆ ಹಾಗೂ ಹೋರಾಟಗಾರರಿಗೆ ಬೆಂಬಲ ಸೂಚಿಸಿದ್ದಾರೆ.
The post ಎರಡನೇ ದಿನಕ್ಕೆ ಕಾಲಿಟ್ಟ ಬಿಡದಿ ಟೌನ್ಶಿಪ್ ವಿರುದ್ಧದ ಪಾದಯಾತ್ರೆ! first appeared on Freedom TV.
ನಿಮ್ಮ ಪ್ರತಿಕ್ರಿಯೆ ಏನು?
ಇಷ್ಟ
0
ಇಷ್ಟವಿಲ್ಲ
0
ಪ್ರೀತಿ
0
ತಮಾಷೆ
0
ವಾಹ್
0
ದುಃಖ
0
ಕೋಪಗೊಂಡ
0
ಕಾಮೆಂಟ್ಗಳು (0)