KPSC ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್‌ ಅಮಾನತು!

ಆಗಸ್ಟ್ 26, 2026 - 11:17
0 0

ಬೆಂಗಳೂರು : ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ ಸಂಬಂಧ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಮತ್ತೆ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಅಮಾನತು ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಆಗಸ್ಟ್ 18ರ ಸಚಿವ ಸಂಪುಟ ಶಿಫಾರಸಿನ ಮೇರೆಗೆ ರಾಜ್ಯಪಾಲರು ಕ್ರಮ ಕೈಗೊಂಡಿದ್ದಾರೆ. ಇನ್ನು ರಾಜ್ಯ ಸರ್ಕಾರವನ್ನೇ ಯಾಮಾರಿಸಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಎಸ್ಕೇಪ್ ಆದ್ರಾ ಅನ್ನೋ ಚರ್ಚೆಗಳು ಶುರುವಾಗಿವೆ.

ಇಡಿ ದಾಳಿ ಬೆನ್ನಲ್ಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ತುರ್ತು ರಜೆ ಹಾಕಿ ದಾಖಲೆಗಳ ಸಮೇತ ಬೆಂಗಳೂರಿನ ಮನೆ ಖಾಲಿ ಮಾಡಿ ನಾಪತ್ತೆಯಾಗಿದ್ದಾರೆ. ಲಖನೌದಲ್ಲಿರುವ ತಂದೆಯ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಏನೂ ಮಾಹಿತಿ ಸಿಕ್ಕಿಲ್ಲ. ಸದ್ಯ ಜ್ಞಾನೇಂದ್ರ ಕುಮಾರ್ ಪರಾರಿಯಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

The post KPSC ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್‌ ಅಮಾನತು! first appeared on Freedom TV.

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0

ಕಾಮೆಂಟ್‌ಗಳು (0)

User