ಬ್ರೇನ್-ಓ-ಬ್ರೇನ್ ಸ್ಪರ್ಧೆಯಲ್ಲಿ ನಾಗರಹಾಳ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಜುಲೈ 30, 2026 - 18:11
0 5

ರಾಜ್ಯಮಟ್ಟದ ಬ್ರೇನ್-ಓ-ಬ್ರೇನ್ ಸ್ಪರ್ಧೆಯಲ್ಲಿ ನಾಗರಹಾಳ ವಿದ್ಯಾರ್ಥಿಗಳ ಅದ್ಭುತ ಸಾಧನೆ

14 ಗೋಲ್ಡ್, 14 ಚಾಂಪಿಯನ್, 6 ಸಿಲ್ವರ್ ಪದಕಗಳೊಂದಿಗೆ ಮಿಂಚಿದ ಬ್ರೇನ್-ಓ-ಬ್ರೇನ್ ಕೇಂದ್ರ

ಮುದಗಲ್ (Vikas News): ಲಿಂಗಸುಗೂರು ತಾಲ್ಲೂಕಿನ ಮುದಗಲ್ ಸಮೀಪದ ನಾಗರಹಾಳ ಗ್ರಾಮದ ಬ್ರೇನ್-ಓ-ಬ್ರೇನ್ ಕೇಂದ್ರದ ವಿದ್ಯಾರ್ಥಿಗಳು ರಾಜ್ಯಮಟ್ಟದ ಬ್ರೇನ್-ಓ-ಬ್ರೇನ್ ಅಬ್ಯಾಕಸ್ ಕೌಶಲ್ಯ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

ಜುಲೈ 26ರಂದು ಬೆಂಗಳೂರಿನ ಡಾ. ಬಾಬು ಜಗಜೀವನರಾಂ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ವಾರ್ಷಿಕ ಬ್ರೇನ್-ಓ-ಬ್ರೇನ್ ಉತ್ಸವದಲ್ಲಿ ನಾಗರಹಾಳ ಕೇಂದ್ರದ 34 ವಿದ್ಯಾರ್ಥಿಗಳು ಭಾಗವಹಿಸಿ ಗಮನಾರ್ಹ ಸಾಧನೆ ದಾಖಲಿಸಿದರು. ವಿದ್ಯಾರ್ಥಿಗಳಲ್ಲಿ ಪವಿತ್ರಾ ದೌಲತ್ರಾಯ ವಡವಡಗಿ ಸೇರಿದಂತೆ 14 ಮಂದಿ ಗೋಲ್ಡ್ ಮೆಡಲ್, 14 ಮಂದಿ ಚಾಂಪಿಯನ್ ಪ್ರಶಸ್ತಿ ಹಾಗೂ 6 ಮಂದಿ ಸಿಲ್ವರ್ ಮೆಡಲ್ ಪಡೆದು ಕೇಂದ್ರದ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಹೆಚ್ಚಿಸಿದ್ದಾರೆ.

ಈ ಸಾಧನೆಯ ಹಿಂದೆ ಕೇಂದ್ರದ ಮೆಂಟರ್ ಮಂಜುಳಾ ಪಾಟೀಲ್ ಅವರ ಸಮರ್ಪಕ ತರಬೇತಿ ಮತ್ತು ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿಗಳ ನಿರಂತರ ಅಭ್ಯಾಸ ಹಾಗೂ ಪಾಲಕರ ಸಹಕಾರವೂ ಯಶಸ್ಸಿಗೆ ಬಲ ನೀಡಿದೆ ಎಂದು ತಿಳಿದುಬಂದಿದೆ.

ಸ್ಪರ್ಧೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲಕರೂ ಬೆಂಗಳೂರಿಗೆ ತೆರಳಿ, ತಮ್ಮ ಮಕ್ಕಳ ಸಾಧನೆಯನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ನಾಗರಹಾಳ ಗ್ರಾಮದ ವಿದ್ಯಾರ್ಥಿಗಳ ಈ ಸಾಧನೆ ಗ್ರಾಮಕ್ಕೆ ಹೆಮ್ಮೆ ತಂದುಕೊಟ್ಟಿದ್ದು, ಇತರ ಮಕ್ಕಳಿಗೂ ಸ್ಪೂರ್ತಿದಾಯಕವಾಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಕ್ಷೇತ್ರದ ಗಣ್ಯರು, ಸಾರ್ವಜನಿಕರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 1
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0

ಕಾಮೆಂಟ್‌ಗಳು (0)

User