ಲಿಂಗಸುಗೂರಿನಲ್ಲಿ ಕರ್ನಾಟಕ ಜನಪರ ಅಭಿವೃದ್ಧಿ ಸಂಸ್ಥೆಯ ಮೂರನೇ ಮಹಾಸಭೆ ಯಶಸ್ವಿ
ಲಿಂಗಸುಗೂರಿನಲ್ಲಿ ಕರ್ನಾಟಕ ಜನಪರ ಅಭಿವೃದ್ಧಿ ಸಂಸ್ಥೆಯ ಮೂರನೇ ಮಹಾಸಭೆ ಯಶಸ್ವಿ
ನೂತನ ಪದಾಧಿಕಾರಿಗಳ ಆಯ್ಕೆ – ಸಂಘಟನೆ ಬಲವರ್ಧನೆ, ಸಾಮಾಜಿಕ ಸೇವೆಗೆ ಹೊಸ ಸಂಕಲ್ಪ
ಲಿಂಗಸುಗೂರು, ಆ.1 (ವಿಕಾಸ್ ನ್ಯೂಸ್): ಕರ್ನಾಟಕ ಜನಪರ ಅಭಿವೃದ್ಧಿ ಸಂಸ್ಥೆ (ರಿ.) ಹಾಗೂ ಕರ್ನಾಟಕ ಜನಪರ ಹೋರಾಟ ಸಮಿತಿ (ರಿ.) ವತಿಯಿಂದ ಆಯೋಜಿಸಲಾಗಿದ್ದ ಮೂರನೇ ಮಹಾಸಭೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಕನಕ ಭವನದಲ್ಲಿ ಅದ್ಧೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ರಾಜ್ಯಾಧ್ಯಕ್ಷ ದೇವರಾಜ್ ಹಾಗೂ ರಾಜ್ಯ ಉಪಾಧ್ಯಕ್ಷೆ ವಾಣಿ ಎನ್. ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಚನ್ನಬಸಪ್ಪ ಕಿಡದೂರು ವಹಿಸಿಕೊಂಡಿದ್ದು, ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವೆಂಕಟೇಶ್ ಇಸಾಪುರ ಸಮರ್ಥವಾಗಿ ನಿರ್ವಹಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ರೆಹಮಾನ್ ಚಿನ್ನಿಕಟ್ಟೆ, ಸಂಸ್ಥೆಯ ಉದ್ದೇಶಗಳು, ಸಂಘಟನೆಯ ವಿಸ್ತರಣೆ ಹಾಗೂ ಸಮಾಜಮುಖಿ ಸೇವೆಗಳ ಕುರಿತು ವಿವರಿಸಿದರು. ರಾಜ್ಯದಾದ್ಯಂತ ಜನಪರ ಹೋರಾಟಗಳನ್ನು ಬಲಪಡಿಸುವ ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಗೆ ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಪರ ಹೋರಾಟ ಸಮಿತಿಯ ವಿವಿಧ ಹುದ್ದೆಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಮಲ್ಲಪ್ಪ ಬೊಮ್ಮನಾಳ್ ಅವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ವಿಟ್ಟಲ್ ಕೆಳತ್ ಅವರನ್ನು ಮಸ್ಕಿ ತಾಲ್ಲೂಕು ಅಧ್ಯಕ್ಷರಾಗಿ, ಅಯ್ಯಪ್ಪ ಅವರನ್ನು ಉಪಾಧ್ಯಕ್ಷರಾಗಿ, ರಮೇಶ್ ಅವರನ್ನು ಕಾರ್ಯದರ್ಶಿಯಾಗಿ, ನಾಗರಾಜ್ ಅವರನ್ನು ಸಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಇದೇ ವೇಳೆ ಸುನಂದಮ್ಮ (ಹಟ್ಟಿ) ಅವರನ್ನು ಲಿಂಗಸುಗೂರು ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ, ನೀಲಮ್ಮ ಅವರನ್ನು ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಹಾಗೂ ಚೌಡಪ್ಪ ಅವರನ್ನು ಲಿಂಗಸುಗೂರು ತಾಲ್ಲೂಕು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಅಧ್ಯಕ್ಷರು, ಸದಸ್ಯರು, ಪ್ರಗತಿಪರ ಚಿಂತಕರು, ಪತ್ರಿಕಾ ಪ್ರತಿನಿಧಿಗಳು ಹಾಗೂ ವಿವಿಧ ತಾಲೂಕಿನ ಮುಖಂಡರನ್ನು ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂತೋಷ್, ಸಂತೋಷ್ ಪಾಟೀಲ್, ಲಕ್ಷ್ಮಣ, ಗಿರಿಸ್ವಾಮಿ, ರಾಯಪ್ಪ, ಹೊನ್ನಪ್ಪ, ಗ್ಯಾನಪ್ಪ, ಹೊಳಿಯಪ್ಪ, ಮಹಾಂತೇಶ್ ಹಾಗೂ ರಾಜ್ಯ ಸಮಿತಿಯ ನಿರ್ದೇಶಕ ಖಾದರ್ ಷರೀಫ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ್ ಬಿ. ಅಚ್ಚುಕಟ್ಟಾಗಿ ನಿರ್ವಹಿಸಿದರು.
ಸಂಘಟನೆಯ ಅಭಿವೃದ್ಧಿ, ಜನಪರ ಹೋರಾಟ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ರಾಜ್ಯದಾದ್ಯಂತ ಇನ್ನಷ್ಟು ವಿಸ್ತರಿಸುವ ಸಂಕಲ್ಪದೊಂದಿಗೆ ಮಹಾಸಭೆ ಯಶಸ್ವಿಯಾಗಿ ಸಮಾಪ್ತಿಯಾಯಿತು.
*ಸತ್ಯದೊಂದಿಗೆ ಸದಾ ನಿಮಗಾಗಿ*
*ಇದು ನಿಮ್ಮ ವಿಕಾಸ ನ್ಯೂಸ್ Digital Media* ನಿಮ್ಮ ಪ್ರೋತ್ಸಾಹ ಸದಾ ಇರಲಿ, ಸುದ್ದಿ & ಜಾಹಿರಾತಿಗಾಗಿ ಸಂಪರ್ಕಿಸಿ : *9663272999 – 9449266958,
ನಿಮ್ಮ ಪ್ರತಿಕ್ರಿಯೆ ಏನು?
ಇಷ್ಟ
0
ಇಷ್ಟವಿಲ್ಲ
0
ಪ್ರೀತಿ
0
ತಮಾಷೆ
0
ವಾಹ್
0
ದುಃಖ
0
ಕೋಪಗೊಂಡ
0
ಕಾಮೆಂಟ್‌ಗಳು (0)