ಬೆಂಗಳೂರಿನ ವಾಹನ ಸವಾರರಿಗೆ ಬಿಗ್ ಶಾಕ್ – ಉಚಿತ ಪಾರ್ಕಿಂಗ್ ವ್ಯವಸ್ಥೆಗೆ ಬ್ರೇಕ್!
ಬೆಂಗಳೂರು : ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಅಸ್ತವ್ಯಸ್ತ ಪಾರ್ಕಿಂಗ್ಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಟ್ಟುನಿಟ್ಟಿನ ಹೊಸ ಪಾರ್ಕಿಂಗ್ ನೀತಿಗೆ ಮುಂದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರವು ಕರಡು ಅಧಿಸೂಚನೆ ಹೊರಡಿಸಿದ್ದು, ಇದುವರೆಗೆ ಜಾರಿಯಲ್ಲಿದ್ದ ಉಚಿತ ಪಾರ್ಕಿಂಗ್ ವ್ಯವಸ್ಥೆಗೆ ಅಧಿಕೃತವಾಗಿ ಬ್ರೇಕ್ ಬೀಳಲಿದೆ.
ಹೊಸ ನೀತಿಯಡಿ ನಗರದ ರಸ್ತೆಗಳನ್ನು ಮೂರು ಮಾದರಿಗಳಾಗಿ ವಿಂಗಡಿಸಲಾಗಿದ್ದು, ರಸ್ತೆಯ ಪ್ರಾಮುಖ್ಯತೆಗೆ ತಕ್ಕಂತೆ ವಿಭಿನ್ನ ಪಾರ್ಕಿಂಗ್ ಶುಲ್ಕ ನಿಗದಿಪಡಿಸಲು ತೀರ್ಮಾನಿಸಲಾಗಿದೆ. ವಾಹನ ಸವಾರರಿಗಾಗಿ ಆಫ್-ಸ್ಟ್ರೀಟ್ ಪಾರ್ಕಿಂಗ್, ಆನ್-ಸ್ಟ್ರೀಟ್ ಪಾರ್ಕಿಂಗ್ ಹಾಗೂ ಮಾಸಿಕ ಪಾರ್ಕಿಂಗ್ ಪಾಸ್ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ. ಯಾವ ವಾಹನಕ್ಕೆ ಎಷ್ಟು ಶುಲ್ಕ ವಿಧಿಸಬೇಕು ಎಂಬುದರ ಸಂಪೂರ್ಣ ವಿವರಗಳು ಕರಡು ಅಧಿಸೂಚನೆಯಲ್ಲಿವೆ.
ನಗರದಲ್ಲಿ ಹೆಚ್ಚಿನ ಪಾರ್ಕಿಂಗ್ ಸ್ಥಳಗಳನ್ನು ಸೃಷ್ಟಿಸುವ ಸಲುವಾಗಿ, ಸರ್ಕಾರಿ ನಿಗಮಗಳ ಜಾಗಗಳನ್ನು ಬಳಸಿಕೊಳ್ಳಲು ಮತ್ತು ಖಾಲಿ ನಿವೇಶನಗಳನ್ನು ಪಾರ್ಕಿಂಗ್ಗಾಗಿ ಬಿಟ್ಟುಕೊಡುವ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಆಕರ್ಷಕ ಪ್ರಸ್ತಾವನೆಯನ್ನು ಸಹ ಕೈಗೊಳ್ಳಲಾಗಿದೆ.
ಎಲ್ಲೆಲ್ಲಿ ಪಾರ್ಕಿಂಗ್ ಸಂಪೂರ್ಣ ನಿಷೇಧ?
- ಮೆಟ್ರೋ ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳ ಸುತ್ತಮುತ್ತ
- ಪ್ರಮುಖ ಆರ್ಟಿರಿಯಲ್ ರಸ್ತೆಗಳಲ್ಲಿ
- ಸಿಗ್ನಲ್ಗಳಿಂದ 50 ಮೀಟರ್ ಅಂತರದವರೆಗೆ
- ಉಪಮುಖ್ಯ ರಸ್ತೆಗಳಿಂದ 25 ಮೀಟರ್ ವ್ಯಾಪ್ತಿಯವರೆಗೆ
The post ಬೆಂಗಳೂರಿನ ವಾಹನ ಸವಾರರಿಗೆ ಬಿಗ್ ಶಾಕ್ – ಉಚಿತ ಪಾರ್ಕಿಂಗ್ ವ್ಯವಸ್ಥೆಗೆ ಬ್ರೇಕ್! first appeared on Freedom TV.
ನಿಮ್ಮ ಪ್ರತಿಕ್ರಿಯೆ ಏನು?
ಇಷ್ಟ
0
ಇಷ್ಟವಿಲ್ಲ
0
ಪ್ರೀತಿ
0
ತಮಾಷೆ
0
ವಾಹ್
0
ದುಃಖ
0
ಕೋಪಗೊಂಡ
0
ಕಾಮೆಂಟ್ಗಳು (0)