‘ತೊಡರುಬಳ್ಳಿ’ ಕೃತಿ ಲೋಕಾರ್ಪಣೆ: ಆತ್ಮೀಯರ ಉಪಸ್ಥಿತಿಗೆ ಡಾ. ಎಂ.ಎಸ್. ಮಣಿ ಮನವಿ

ಆಗಸ್ಟ್ 25, 2026 - 13:07
0 1
‘ತೊಡರುಬಳ್ಳಿ’ ಕೃತಿ ಲೋಕಾರ್ಪಣೆ: ಆತ್ಮೀಯರ ಉಪಸ್ಥಿತಿಗೆ ಡಾ. ಎಂ.ಎಸ್. ಮಣಿ ಮನವಿ

Vikas News Kannada

‘ತೊಡರುಬಳ್ಳಿ’ ಕೃತಿ ಲೋಕಾರ್ಪಣೆ: ಆತ್ಮೀಯರ ಉಪಸ್ಥಿತಿಗೆ ಡಾ. ಎಂ.ಎಸ್. ಮಣಿ ಮನವಿ

ಬೆಂಗಳೂರು: ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ, ಮೂಢನಂಬಿಕೆ, ರಾಜಕಾರಣ ಹಾಗೂ ಶಿಕ್ಷಣದ ವ್ಯಾಪಾರೀಕರಣ ಸೇರಿದಂತೆ ಸಮಾಜದ ಪ್ರಗತಿಗೆ ತೊಡಕಾಗಿರುವ ಹಲವು ಸಮಸ್ಯೆಗಳನ್ನು ಅನಾವರಣಗೊಳಿಸುವ ‘ತೊಡರುಬಳ್ಳಿ’ ಕೃತಿ ಶೀಘ್ರದಲ್ಲೇ ಓದುಗರ ಕೈ ಸೇರಲಿದೆ.ಆಗಸ್ಟ್ 24ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಗಾಂಧಿಭವನದ ಮೊದಲ ಮಹಡಿಯಲ್ಲಿರುವ ಮಹದೇವ ದೇಸಾಯಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಧೀಮಂತ ನಾಯಕರ ಹೆಸರಿನಲ್ಲಿ ಮಾರ್ಗದರ್ಶಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ಸಂದರ್ಭದಲ್ಲಿ ಡಾ. ಎಂ.ಎಸ್. ಮಣಿ ಅವರ ‘ತೊಡರುಬಳ್ಳಿ’ ಕೃತಿ ಲೋಕಾರ್ಪಣೆಗೊಳ್ಳಲಿದೆ.“ತೊಡರುಬಳ್ಳಿ ಎಂದರೆ ಕಾಲಿಗೆ ಸುತ್ತಿಕೊಂಡು ನಡೆಯುವುದಕ್ಕೂ, ಬದುಕು ನಡೆಸುವುದಕ್ಕೂ ಅಡ್ಡಿಯಾಗುವ ಬಳ್ಳಿ. ನನ್ನ ಕೃತಿಯಲ್ಲಿರುವ ಪ್ರತಿಯೊಂದು ಲೇಖನವೂ ಸಮಾಜಕ್ಕೆ ತೊಡರುಬಳ್ಳಿಯಂತೆ ಅಂಟಿಕೊಂಡಿರುವ ಸಮಸ್ಯೆಗಳನ್ನು ಅನಾವರಣಗೊಳಿಸುತ್ತದೆ. ಇದರಲ್ಲಿ ನನ್ನ ನೋವು, ಹೋರಾಟ ಹಾಗೂ ಸಾಮಾಜಿಕ ಕಾಳಜಿ ಅಡಗಿದೆ” ಎಂದು ಡಾ. ಮಣಿ ತಿಳಿಸಿದ್ದಾರೆ.
ಜಾತಿ, ಅಸಮಾನತೆ, ಮೂಢನಂಬಿಕೆ, ರಾಜಕಾರಣ ಹಾಗೂ ಶಿಕ್ಷಣದ ವ್ಯಾಪಾರೀಕರಣದಂತಹ ತೊಡರುಗಳನ್ನು ಕಿತ್ತುಹಾಕುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ಗೌರವಿಸುವ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯವನ್ನು ಕೃತಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

      ಕಾರ್ಯಕ್ರಮಕ್ಕೆ ತಮ್ಮ ಆತ್ಮೀಯರು, ಸ್ನೇಹಿತರು ಹಾಗೂ ಹಿತೈಷಿಗಳು ಆಗಮಿಸಿ ಆಶೀರ್ವದಿಸಬೇಕು. ಪುಸ್ತಕವನ್ನು ಓದಿ ತಮ್ಮ ಅಭಿಪ್ರಾಯ, ಟೀಕೆ ಹಾಗೂ ಟಿಪ್ಪಣಿಗಳನ್ನು ತಿಳಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಡಾ. ಎಂ.ಎಸ್. ಮಣಿ ಮನವಿ ಮಾಡಿದ್ದಾರೆ.

ಡಾ.ಎಂಎಸ್.ಮಣಿ

“ಇದೇ ಜನ್ಮದಲ್ಲಿ ನಿಮ್ಮನ್ನು ಕಾಣಬಹುದು. ಇರುವಷ್ಟು ದಿನ ಸಹೋದರತ್ವದಿಂದ ಬದುಕೋಣ. ತೊಡರುಬಳ್ಳಿಗಳನ್ನು ಕಿತ್ತುಹಾಕೋಣ, ಮನುಷ್ಯರನ್ನು ಮನುಷ್ಯರನ್ನಾಗಿ ಗೌರವಿಸೋಣ” ಎಂದು ಅವರು ಭಾವನಾತ್ಮಕವಾಗಿ ಕರೆ ನೀಡಿದ್ದಾರೆ.

ಸ್ಥಳ: ಮಹದೇವ ದೇಸಾಯಿ ಸಭಾಂಗಣ, 1ನೇ ಮಹಡಿ, ಗಾಂಧಿಭವನ, ಬೆಂಗಳೂರು
ದಿನಾಂಕ: 24-08-2026, ಸೋಮವಾರ
ಸಮಯ: ಬೆಳಿಗ್ಗೆ 11 ಗಂಟೆ

*ಸತ್ಯದೊಂದಿಗೆ ಸದಾ ನಿಮಗಾಗಿ*
*ಇದು ನಿಮ್ಮ ವಿಕಾಸ ನ್ಯೂಸ್ Digital Media* ನಿಮ್ಮ ಪ್ರೋತ್ಸಾಹ ಸದಾ ಇರಲಿ, ಸುದ್ದಿ & ಜಾಹಿರಾತಿಗಾಗಿ ಸಂಪರ್ಕಿಸಿ : *9663272999 – 9449266958,

– ಎಸ್.ಬಿ.ಒಡೆಯರ್ ಮುದಗಲ್

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 1
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0

ಕಾಮೆಂಟ್‌ಗಳು (0)

User