ತಂಗಿಯ ಸಾವಿನಿಂದ ಮನನೊಂದು ಸಹೋದರ ಆತ್ಮಹತ್ಯೆ!

ಆಗಸ್ಟ್ 14, 2026 - 04:59
0 0

ಮಂಗಳೂರು : ತಂಗಿಯ ಸಾವಿನಿಂದ ಮನನೊಂದು ಸಹೋದರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಬಜಪೆ ಬಳಿಯ ಖಾಸಗಿ ಲಾಡ್ಜ್​​ನಲ್ಲಿ ನಡೆದಿದೆ. ಕೇರಳದ ಬೇಕಲ್ ಮೂಲದ ಅರ್ಜುನ್ ಮಹೇಶ್ (24) ಮೃತ ದುರ್ದೈವಿ.

ಕಳೆದ ಜೂನ್‌ನಲ್ಲಿ ನೀಟ್​ ಪರೀಕ್ಷೆ ಲೀಕ್​ ಬಳಿಕ ಸಹೋದರಿ ಐಜಾ ಆತ್ಮಹತ್ಯೆಗೆ ಶರಣಾಗಿದ್ದಳು. ತಂಗಿಯ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ಅರ್ಜುನ್, ಗಲ್ಫ್​​ನಿಂದ ಮಂಗಳೂರಿಗೆ ಬಂದ ಕೆಲವೇ ಗಂಟೆಗಳಲ್ಲಿ ಸೂಸೈಡ್​ ಮಾಡಿಕೊಂಡಿದ್ದಾನೆ.

ಗಲ್ಪ್‌ನಲ್ಲಿ ಉದ್ಯೋಗದಲ್ಲಿದ್ದ ಅರ್ಜುನ್​​​ ಭಾನುವಾರ ಗಲ್ಫ್​​ನಿಂದ ಮಂಗಳೂರಿಗೆ ಬಂದಿದ್ದ. ಯುವಕ ಗಲ್ಫ್‌ನಿಂದ ಬಂದರೂ ಮನೆಗೆ ತಲುಪಿರಲಿಲ್ಲ. ಹಾಗಾಗಿ ಅರ್ಜುನ್‌ಗೆ ಕುಟುಂಬಸ್ಥರು ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್‌ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.

ಈ ವೇಳೆ ಬಜಪೆಯ ಮರವೂರಿನ ಲಾಡ್ಜ್‌ನಲ್ಲಿ ಅರ್ಜುನ್ ಶವ ಪತ್ತೆಯಾಗಿದೆ. ತಂಗಿಯ ಅಗಲಿಕೆಯ ನೋವನ್ನು ತಾಳಲಾರದೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ.

The post ತಂಗಿಯ ಸಾವಿನಿಂದ ಮನನೊಂದು ಸಹೋದರ ಆತ್ಮಹತ್ಯೆ! first appeared on Freedom TV.

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0

ಕಾಮೆಂಟ್‌ಗಳು (0)

User