ಕೋರಮಂಗಲ ನೆಕ್ಸಸ್ ಮಾಲ್‌ಗೆ GBA ಶಾಕ್: ಪ್ರತಿಷ್ಠಿತ ಮಳಿಗೆಗಳಿಗೆ ಭಾರೀ ದಂಡ ಯಾಕೆ..?

ಆಗಸ್ಟ್ 28, 2026 - 12:17
0 0
ಕೋರಮಂಗಲ ನೆಕ್ಸಸ್ ಮಾಲ್‌ಗೆ GBA ಶಾಕ್: ಪ್ರತಿಷ್ಠಿತ ಮಳಿಗೆಗಳಿಗೆ ಭಾರೀ ದಂಡ ಯಾಕೆ..?

ಬೆಂಗಳೂರು: ಕಸ ವಿಂಗಡಣೆ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಕೋರಮಂಗಲದ ಪ್ರತಿಷ್ಠಿತ ನೆಕ್ಸಸ್ ಮಾಲ್‌ನ ಹಲವು ಮಳಿಗೆಗಳಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಮಾಲ್‌ನ ಒಟ್ಟು 10 ಮಳಿಗೆಗಳಿಂದ ₹85 ಸಾವಿರ ದಂಡ ವಸೂಲಿ ಮಾಡಲಾಗಿದೆ.

Siddaramaiah : ಸುಮ್ಮನೆ ಕೂರದ ಸಿದ್ದರಾಮಯ್ಯ, ಅಹಿಂದ ಚಳವಳಿಗೆ ಮತ್ತೆ ಸಿದ್ದು ದನಿ   #siddaramaiah

ಮಾಲ್‌ನಲ್ಲಿರುವ ಫುಡ್ ಕೋರ್ಟ್ ಸೇರಿದಂತೆ ವಿವಿಧ ಮಳಿಗೆಗಳಲ್ಲಿ ತಪಾಸಣೆ ನಡೆಸಿದ ವೇಳೆ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸದೆ ಮಿಶ್ರಣ ಮಾಡಿ ವಿಲೇವಾರಿ ಮಾಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದರ ಜೊತೆಗೆ ನಿಷೇಧಿತ ಪ್ಲಾಸ್ಟಿಕ್ ಹಾಗೂ ಸಿಂಗಲ್ ಯೂಸ್ ಪ್ಲಾಸ್ಟಿಕ್ (SUP) ಬಳಕೆ ಮಾಡಿರುವುದೂ ಪತ್ತೆಯಾಗಿದೆ ಎನ್ನಲಾಗಿದೆ.

ಪ್ರತಿಷ್ಠಿತ ಬ್ರಾಂಡ್‌ಗಳಿಗೂ ದಂಡ

ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಹಲವು ಪ್ರಸಿದ್ಧ ಆಹಾರ ಮಳಿಗೆಗಳಿಗೂ ದಂಡ ವಿಧಿಸಲಾಗಿದೆ. ಚಸ್ಕಾ ಬನ್ ಮಳಿಗೆಗೆ ₹25 ಸಾವಿರ ದಂಡ ವಿಧಿಸಲಾಗಿದ್ದು, ಮೆಕ್‌ಡೊನಾಲ್ಡ್ಸ್ ಹಾಗೂ ಬರ್ಗರ್ ಕಿಂಗ್‌ಗೆ ತಲಾ ₹10 ಸಾವಿರ ದಂಡ ಹಾಕಲಾಗಿದೆ. ಇನ್ನುಳಿದ ಮಳಿಗೆಗಳಲ್ಲೂ ಕಸ ವಿಂಗಡಣೆ ಹಾಗೂ ಪ್ಲಾಸ್ಟಿಕ್ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಒಟ್ಟಾರೆ 10 ಮಳಿಗೆಗಳಿಂದ ₹85 ಸಾವಿರ ದಂಡವನ್ನು ಜಿಬಿಎ ಅಧಿಕಾರಿಗಳು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

Actor Kishore On SIR : ಇದು ಚುನಾವಣಾ ಆಯೋಗದ ನಿರ್ಧಾರವಲ್ಲ, ಪ್ರಜೆಗಳ ಹಕ್ಕು ಕಿತ್ತುಕೊಳ್ಳೋದು ಸ್ಕ್ಯಾಮ್ ಅಲ್ಲವೇ?.

ನಗರದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸುವುದು ಕಡ್ಡಾಯವಾಗಿದೆ. ಆದರೆ ದೊಡ್ಡ ವಾಣಿಜ್ಯ ಮಳಿಗೆಗಳಲ್ಲೇ ನಿಯಮ ಪಾಲನೆಯಾಗದಿರುವುದಕ್ಕೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಲ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳು ತ್ಯಾಜ್ಯ ವಿಂಗಡಣೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಬಿಎ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Lakshmi Hebbalkar : ಗೃಹಲಕ್ಷ್ಮೀ ಹಣ ಬಗ್ಗೆ ಕ್ಲಾರಿಟಿ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್.! #congress #Gruhalakshmi

The post ಕೋರಮಂಗಲ ನೆಕ್ಸಸ್ ಮಾಲ್‌ಗೆ GBA ಶಾಕ್: ಪ್ರತಿಷ್ಠಿತ ಮಳಿಗೆಗಳಿಗೆ ಭಾರೀ ದಂಡ ಯಾಕೆ..? appeared first on Pratidhvani.

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0

ಕಾಮೆಂಟ್‌ಗಳು (0)

User