ಅತಂತ್ರದಲ್ಲಿ ಸಚಿವ ಬಿ. ನಾಗೇಂದ್ರ ಭವಿಷ್ಯ – ಸೆ.1ರೊಳಗೆ ರಾಜೀನಾಮೆ ನೀಡೋದು ಫಿಕ್ಸ್?

ಆಗಸ್ಟ್ 26, 2026 - 11:17
0 0

ಬೆಂಗಳೂರು : ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ- ಜೆಡಿಎಸ್ ಪ್ರತಿಭಟನೆ ನಡೆಸುತ್ತಿದ್ದು, ನಾಗೇಂದ್ರನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದ್ದರು. ಇದೀಗ ಸೆಪ್ಟೆಂಬರ್ 1ರೊಳಗೆ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ವಾಲ್ಮಿಕಿ ಹಗರಣದ ಆರೋಪಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಪಕ್ಷದೊಳಗೇ ಕೆಲವರಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ ಎಂಬ ಗುಸುಗುಸು ಕೇಳಿಬರುತ್ತಿದೆ. ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದರೆ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ನಾಗೇಂದ್ರ ರಾಜೀನಾಮೆ ಕುರಿತಂತೆ ನಾಳೆ ಮಹತ್ವದ ಬೆಳವಣಿಗೆಗಳು ಹೊರಬೀಳುವ ಸಾಧ್ಯತೆಯಿದೆ.

ಡಿ.ಕೆ. ಶಿವಕುಮಾರ್ ಪರೋಕ್ಷ ಸುಳಿವು?

ನಾಗೇಂದ್ರ ರಾಜೀನಾಮೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಶಾಸಕರು, ಸಚಿವರು, ಕಾರ್ಯಕರ್ತರು ಪಕ್ಷದ ಶಿಸ್ತಿನ ಸಿಪಾಯಿಗಳು. ಒಂದು ವೇಳೆ ಹೈಕಮಾಂಡ್ ನಿರ್ದೇಶನ ನೀಡಿದರೆ ನಾಗೇಂದ್ರ ಅವರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಲಿದ್ದಾರೆಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ.

The post ಅತಂತ್ರದಲ್ಲಿ ಸಚಿವ ಬಿ. ನಾಗೇಂದ್ರ ಭವಿಷ್ಯ – ಸೆ.1ರೊಳಗೆ ರಾಜೀನಾಮೆ ನೀಡೋದು ಫಿಕ್ಸ್? first appeared on Freedom TV.

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0

ಕಾಮೆಂಟ್‌ಗಳು (0)

User