ದಾವಣಗೆರೆ ಬೈಎಲೆಕ್ಷನ್‌: ಗೆಲ್ಲೋದ್ಯಾರು ? ಸೋಲೋದ್ಯಾರು ?

ಆಗಸ್ಟ್ 15, 2026 - 21:16
0 0


Ashwaveega News 24×7 ಮೇ 04 – 2026 : ದಾವಣಗೆರೆ :
ರಾಜ್ಯದ ಗಮನ ಸೆಳೆದಿರುವ ದಾವಣಗೆರೆ ಬೈಎಲೆಕ್ಷನ್‌ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಯಾರು ಎಂಬ ಕುತೂಹಲ ತೀವ್ರಗೊಂಡಿದೆ.

ಈ ಬಾರಿ ಪ್ರಮುಖ ಪೈಪೋಟಿ ಸಮರ್ಥ್‌ ಎಸ್‌.ಎಂ. ಮತ್ತು ಶ್ರೀನಿವಾಸ ದಾಸಕರಿಯಪ್ಪ ನಡುವೆ ನಡೆಯುತ್ತಿದ್ದು, ಯಾರಿಗೆ ಗೆಲುವಿನ ಮಾಲೆ ಸಿಗಲಿದೆ ಅಂತ ಕಾದು ನೋಡಬೇಕಾಗಿದೆ …

ಒಟ್ಟು 1,58,404 ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದು, ಅವರ ತೀರ್ಪು ಶೀಘ್ರದಲ್ಲೇ ಬಹಿರಂಗವಾಗಲಿದೆ. ಮತ ಎಣಿಕೆಗೆ ದಾವಣಗೆರೆಯ ಡಿಆರ್‌ಆರ್‌ ಕಾಲೇಜಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ಈ ಚುನಾವಣೆಯು ಹೈವೋಲ್ಟೇಜ್‌ “ದಂಗಲ್‌” ಆಗಿ ಪರಿಣಮಿಸಿದ್ದು, ವಿವಿಧ ರಾಜಕೀಯ ಲೆಕ್ಕಾಚಾರಗಳು ಕುತೂಹಲ ಹುಟ್ಟಿಸಿವೆ.

ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಇರುವ ಪ್ಲಸ್‌ ಮತ್ತು ಮೈನಸ್‌ ಅಂಶಗಳು, ಹಾಗೆಯೇ ಬಿಜೆಪಿಗೆ ಅನುಕೂಲ-ಪ್ರತಿಕೂಲ ಪರಿಸ್ಥಿತಿಗಳು ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಲಿಂಗಾಯತ ಸಮುದಾಯದ ಒಗ್ಗಟ್ಟು ಕಾಂಗ್ರೆಸ್‌ಗೆ ವರವಾಗುತ್ತದೆಯೇ? ಮುಸ್ಲಿಂ ಮತಗಳ ವಿಭಜನೆ ಬಿಜೆಪಿಗೆ ಲಾಭವಾಗುತ್ತದೆಯೇ? ಎಂಬ ಪ್ರಶ್ನೆಗಳು ಪ್ರಮುಖವಾಗಿವೆ.

ಈ ಬಾರಿ 68.55% ಮತದಾನ ದಾಖಲಾಗಿದ್ದು, ಇದು ಯಾರ ಪಾಲಿಗೆ ಅನುಕೂಲವಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟು ಮತದಾರರಲ್ಲಿ 78,437 ಪುರುಷರು ಹಾಗೂ 79,949 ಮಹಿಳೆಯರು ಮತ ಚಲಾಯಿಸಿದ್ದಾರೆ.

The post ದಾವಣಗೆರೆ ಬೈಎಲೆಕ್ಷನ್‌: ಗೆಲ್ಲೋದ್ಯಾರು ? ಸೋಲೋದ್ಯಾರು ? appeared first on Ashwaveega News.

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0
Onlinehuntdesk

C E O ONLINE HUNT APP

ಕಾಮೆಂಟ್‌ಗಳು (0)

User