ಅವೋರ್ ಎಲೆಕ್ಟ್ರಿಕ್‌ನ ಮೊದಲ ಇ-ಬೈಕ್ ‘ಇಎಕ್ಸ್’ ರೂ.1.25 ಲಕ್ಷಕ್ಕೆ ಬಿಡುಗಡೆ

ಜುಲೈ 30, 2026 - 18:12
0 0
ಅವೋರ್ ಎಲೆಕ್ಟ್ರಿಕ್‌ನ ಮೊದಲ ಇ-ಬೈಕ್ ‘ಇಎಕ್ಸ್’ ರೂ.1.25 ಲಕ್ಷಕ್ಕೆ ಬಿಡುಗಡೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಸಮರ್ಥ್ ಇ-ಮೊಬಿಲಿಟಿ ಸಂಸ್ಥೆಯ ಭಾಗವಾಗಿರುವ ಭಾರತದ ತಂತ್ರಜ್ಞಾನ ಆಧಾರಿತ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ ತಯಾರಕ ಸಂಸ್ಥೆ ಅವೋರ್ ಎಲೆಕ್ಟ್ರಿಕ್ (Avor Electric) , ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ ಅವೋರ್ ಎಲೆಕ್ಟ್ರಿಕ್ ಇಎಕ್ಸ್ ಅನ್ನು ಬಿಡುಗಡೆ ಮಾಡಿದೆ.

ಇಎಕ್ಸ್ 2ಎಸ್, ಇಎಕ್ಸ್ 2 ಮತ್ತು ಇಎಕ್ಸ್ 1 ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುವ ಈ ಬೈಕ್‌ ನ ಆರಂಭಿಕ ಬೆಲೆ ರೂ. 1,24,999 (ಎಕ್ಸ್ ಶೋರೂಮ್). ಸ್ವದೇಶಿ ತಂತ್ರಜ್ಞಾನ, ಜಾಣ್ಮೆಯ ಎಂಜಿನಿಯರಿಂಗ್ ಮತ್ತು ದೈನಂದಿನ ಬಳಕೆಗೆ ಸೂಕ್ತವಾದ ವಿನ್ಯಾಸದ ಮೂಲಕ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಸವಾರಿಯನ್ನು ಮತ್ತಷ್ಟು ಸೊಗಸಾಗಿಸಲು ಈ ಇಎಕ್ಸ್ ಬೈಕ್ ಅನ್ನು ಆರಂಭದಿಂದಲೇ ವಿಶೇಷವಾಗಿ ರೂಪಿಸಲಾಗಿದೆ.

ಬುದ್ಧಿವಂತಿಕೆ ಅಥವಾ ತಂತ್ರಜ್ಞಾನ ಎಂಬುದು ದ್ವಿಚಕ್ರ ವಾಹನಕ್ಕೆ ಸೇರಿಸುವ ಬರಿ ಹೆಚ್ಚುವರಿ ವೈಶಿಷ್ಟ್ಯವಾಗಬಾರದು, ಬದಲಿಗೆ ಅದು ವಾಹನದ ನಿರ್ಮಾಣದ ಮೂಲ ಬುನಾದಿಯಾಗಬೇಕು ಎಂಬ ನಂಬಿಕೆಯೊಂದಿಗೆ ಅವೋರ್ ಎಲೆಕ್ಟ್ರಿಕ್ ಕಾರ್ಯನಿರ್ವಹಿಸುತ್ತದೆ. ಚಲನೆಗೂ ಮೀರಿದ ಬುದ್ಧಿವಂತಿಕೆ ಎಂಬ ತನ್ನ ಟ್ಯಾಗ್‌ ಲೈನ್‌ ನಲ್ಲಿ ಬ್ರ್ಯಾಂಡ್‌ ತನ್ನ ಈ ತತ್ವವನ್ನು ಸಾರಿದೆ.

ಆಕರ್ಷಕ ವಿನ್ಯಾಸ ಮತ್ತು ಚಾಲಕ-ಕೇಂದ್ರಿತ ತಂತ್ರಜ್ಞಾನ

ಅವೋರ್ ಎಲೆಕ್ಟ್ರಿಕ್ ಇಎಕ್ಸ್ ಮೋಟಾರ್‌ ಸೈಕಲ್ ಕಣ್ಣುಸೆಳೆಯುವ ಮತ್ತು ಸೊಗಸಾದ ವಿನ್ಯಾಸ ಶೈಲಿಯನ್ನು ಪರಿಚಯಿಸಿದೆ. ಭಾರತೀಯ ಸವಾರರನ್ನೇ ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪಿಸಲಾದ ಈ ಬೈಕ್, ಸಾಂಪ್ರದಾಯಿಕ ಪೆಟ್ರೋಲ್ (ಐಸಿಇ) ಬೈಕ್‌ ಗಳಿಂದ ಎಲೆಕ್ಟ್ರಿಕ್ ವಾಹನಕ್ಕೆ ಬದಲಾಗುವ ಪ್ರಕ್ರಿಯೆಯನ್ನು ಅತ್ಯಂತ ಸುಲಭ ಹಾಗೂ ನೈಸರ್ಗಿಕವಾಗಿಸುತ್ತದೆ. ಬೈಕ್ ಚಲಾಯಿಸುವ ಭಂಗಿ, ಚಾಲನಾ ಅನುಭವ ಮತ್ತು ಒಟ್ಟಾರೆ ಬಳಕೆಯ ಅನುಭವದಲ್ಲಿ ಇದು ವಿಶಿಷ್ಟವಾಗಿ ಮೂಡಿಬಂದಿದೆ.

ಸಾಂಪ್ರದಾಯಿಕ ಬೈಕ್‌ ಗಳ ಚಿರಪರಿಚಿತ ನೋಟ ಹಾಗೂ ಆಧುನಿಕ ಇವಿ ಎಂಜಿನಿಯರಿಂಗ್ ಅನ್ನು ಇದು ಸಮ್ಮಿಳಿತಗೊಳಿಸಿದೆ. ಇದರ ಆಕರ್ಷಕ ಡ್ಯುಯಲ್-ಟೋನ್ ಸ್ಟೈಲಿಂಗ್, ಕಣ್ಣುಸೆಳೆಯುವ ಟ್ಯಾಂಕ್ ಲೈಟ್‌ಗಳು ಮತ್ತು ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ರೈಡಿಂಗ್ ಮೋಡ್‌ ಗಳನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಗಳು ವಿಶೇಷವಾಗಿದೆ. ಸಾಂಪ್ರದಾಯಿಕ ಬೈಕ್ ಪ್ರಿಯರನ್ನು ಆಕರ್ಷಿಸುವುದರ ಜೊತೆಗೆ, ತನ್ನ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ಸಾಮರ್ಥ್ಯವನ್ನು ಇದು ಆತ್ಮವಿಶ್ವಾಸದಿಂದ ಪ್ರದರ್ಶಿಸುತ್ತದೆ.Kumadvathi College Shikariura

ದೈನಂದಿನ ಬಳಕೆಗೆ ಸೂಕ್ತವಾದ ಶಕ್ತಿಶಾಲಿ ಕಾರ್ಯಕ್ಷಮತೆ

ಅವೋರ್ ಎಲೆಕ್ಟ್ರಿಕ್ ಇಎಕ್ಸ್ ಮೋಟಾರ್‌ ಸೈಕಲ್‌ ನ ಹೃದಯಭಾಗದಲ್ಲಿ ಅತ್ಯಂತ ದಕ್ಷತೆಯ, ಅಪರೂಪದ ಭೂ-ಖನಿಜ ಮುಕ್ತ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಅನ್ನು ಬಳಸಲಾಗಿದೆ. ಇದು ಪೂರೈಕೆ ಸರಪಳಿಯ ಸ್ವಾವಲಂಬನೆ ಹಾಗೂ ದೀರ್ಘಕಾಲಿಕ ಸುಸ್ಥಿರತೆಗೆ ಕಂಪನಿ ನೀಡುವ ಆದ್ಯತೆಯನ್ನು ತೋರಿಸುತ್ತದೆ.

ವೇರಿಯೆಂಟ್‌ ಗೆ ಅನುಗುಣವಾಗಿ ಈ ಬೈಕ್ 7.5 ಕಿವ್ಯಾಟ್ ನಿಂದ 10.5 ಕಿ ವ್ಯಾಟ್ ವರೆಗೆ ಗರಿಷ್ಠ ಪವರ್ ನೀಡುತ್ತದೆ. ನಗರದ ರಸ್ತೆಗಳಿರಲಿ ಅಥವಾ ಹೈವೇ ಇರಲಿ, ಅದ್ಭುತ ಚಾಲನಾ ಅನುಭವಕ್ಕಾಗಿ ಮೂರೂ ವೆರಿಯೆಂಟ್‌ಗಳಲ್ಲಿ 250 ಎನ್ಎಂ ಪೀಕ್ ವೀಲ್ ಟಾರ್ಕ್ ಸಿಗಲಿದೆ. ಇಎಕ್ಸ್ 2ಎಸ್ ವೆರಿಯೆಂಟ್ ಗಂಟೆಗೆ 114 ಕಿ.ಮೀ ಗರಿಷ್ಠ ವೇಗವನ್ನು ತಲುಪಿದರೆ, ಇಎಕ್ಸ್ 2 ಮತ್ತು ಇಎಕ್ಸ್ 1 ವೆರಿಯೆಂಟ್‌ ಗಳು ಗಂಟೆಗೆ 100 ಕಿ.ಮೀ ವೇಗವನ್ನು ತಲುಪಬಲ್ಲವು.

Also Read>> JSW Sports | ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಕುಟುಂಬ ಸೇರಿದ ರಯಾನ್ ವಿಲಿಯಮ್ಸ್

ಇದರ ಜೊತೆಗೆ, ದ್ವಿಚಕ್ರ ವಾಹನ ರಂಗದಲ್ಲೇ ಮೊದಲ ಬಾರಿಗೆ ಇಂಟಿಗ್ರೇಟೆಡ್ ಮೋಟಾರ್ + ಸ್ವಿಂಗ್‌ ಆರ್ಮ್ ಪವರ್‌ ಟ್ರೇನ್ (ಡ್ರೈವ್ ಲಿಂಕ್ ಆರ್ಮ್) ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ವಾಹನದ ತೂಕದ ಸಮತೋಲನ, ಬೈಕ್‌ನ ಹ್ಯಾಂಡ್ಲಿಂಗ್ ಮತ್ತು ಸ್ಥಿರತೆಯನ್ನು ಹೆಚ್ಚಿಸಿ, ಚಾಲಕನಿಗೆ ಚಾಲನೆಯಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ.

ರೇಂಜ್ ಚಿಂತೆಗೆ ತೆರೆ

ಎಲೆಕ್ಟ್ರಿಕ್ ವಾಹನ ಖರೀದಿದಾರರಲ್ಲಿ ಕಾಡುವ ರೇಂಜ್ ಆತಂಕವನ್ನು ನಿವಾರಿಸಲು ಅವೋರ್ ಇಎಕ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಅತ್ಯುನ್ನತ ವೇರಿಯೆಂಟ್ ಗಳಾದ ಇಎಕ್ಸ್ 2ಎಸ್ ಮತ್ತು ಇಎಕ್ಸ್ 2 ಮಾದರಿಗಳು ಕ್ರಮವಾಗಿ 260 ಕಿ.ಮೀ ಹಾಗೂ 255 ಕಿ.ಮೀ ಐಡಿಸಿ-ಪ್ರಮಾಣೀಕೃತ ರೇಂಜ್ ನೀಡುತ್ತವೆ. ಇನ್ನು ಇಎಕ್ಸ್ 1 ಮಾದರಿಯು ಒಂದೇ ಚಾರ್ಜ್‌ ನಲ್ಲಿ 160 ಕಿ.ಮೀ ರೇಂಜ್ ನೀಡಲಿದೆ.

ಚಾರ್ಜಿಂಗ್ ಪ್ರಕ್ರಿಯೆಯನ್ನು ಸಹ ಅತ್ಯಂತ ಸರಳಗೊಳಿಸಲಾಗಿದೆ. ಮೂರೂ ವೆರಿಯೆಂಟ್‌ಗಳಲ್ಲಿ 1500ವ್ಯಾಟ್ ಆನ್‌ ಬೋರ್ಡ್ ಫಾಸ್ಟ್ ಚಾರ್ಜರ್ ನೀಡಲಾಗಿದ್ದು, ಯಾವುದೇ ಸಾಮಾನ್ಯ 5ಎ ಅಥವಾ 15ಎ ಮನೆಯ ಸಾಕೆಟ್‌ ಗೆ ನೇರವಾಗಿ ಪ್ಲಗ್ ಮಾಡಿ ಚಾರ್ಜ್ ಮಾಡಬಹುದು. ಹೀಗಾಗಿ ಪ್ರತ್ಯೇಕ ಚಾರ್ಜಿಂಗ್ ನೆಟ್‌ ವರ್ಕ್ ಹುಡುಕುವ ಅಗತ್ಯವಿಲ್ಲ. ಕೇವಲ 2 ಗಂಟೆಗಳಲ್ಲಿ ಬ್ಯಾಟರಿಯನ್ನು ಶೇ. 20 ರಿಂದ ಶೇ. 80 ರಷ್ಟು ಚಾರ್ಜ್ ಮಾಡಬಹುದು. ಸಂಪೂರ್ಣ (ಶೇ. 0 ದಿಂದ 100) ಚಾರ್ಜ್ ಆಗಲು ಸರಿಸುಮಾರು 4 ಗಂಟೆಗಳು ಬೇಕಾಗುತ್ತವೆ. ಈ ಬೈಕ್‌ ನ ಬ್ಯಾಟರಿ ಪ್ಯಾಕ್ ಅನ್ನು ನ್ಯಾಟ್ರಾಕ್ಸ್ ನಿಂದ ಅನುಮೋದಿಸಲಾಗಿದ್ದು, ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಬಿಎಂಎಸ್) ಅನ್ನು ಐಸಿಎಟಿ ನಿಂದ ಪ್ರಮಾಣೀಕರಿಸಲಾಗಿದೆ.

ಚಲನೆಗೂ ಮೀರಿದ ತಂತ್ರಜ್ಞಾನ

ತನ್ನ ವಾಹನದ ಬುನಾದಿಯಲ್ಲೇ ಬುದ್ಧಿವಂತಿಕೆ ಮತ್ತು ತಂತ್ರಜ್ಞಾನ ಅಳವಡಿಸುವ ತತ್ವಕ್ಕೆ ಬದ್ಧವಾಗಿರುವ ಕಂಪನಿಯು, ಚಾಲನೆಗೆ ಹೊಸ ಅನುಭವ ನೀಡಲು ಹಲವು ಸ್ವದೇಶಿ ತಂತ್ರಜ್ಞಾನಗಳನ್ನು ಈ ಬೈಕ್‌ ನಲ್ಲಿ ಸಂಯೋಜಿಸಿದೆ. ಈ ವಾಹನದ ಕೇಂದ್ರಭಾಗದಲ್ಲಿ ಅವೋರ್ ಸೆನ್ಸ್ ಎಂಬ ಕಂಪನಿಯ ಸ್ವಂತ ಆಪರೇಟಿಂಗ್ ಸಿಸ್ಟಮ್ ಕಾರ್ಯನಿರ್ವಹಿಸುತ್ತದೆ. ಇದು ಎವಿಎ (ಅವೋರ್ ವೆಹಿಕಲ್ ಅಸಿಸ್ಟೆನ್ಸ್) ಮತ್ತು ಎಐ-ಚಾಲಿತ ಅವೋರ್ ಸೈನಾಪ್ಸ್ ಜೊತೆಗೂಡಿ ಚಾಲಕ ಮತ್ತು ಬೈಕ್ ನಡುವೆ ಅತ್ಯುತ್ತಮ ಸಂವಹನವನ್ನು ಸಾಧ್ಯವಾಗಿಸುತ್ತದೆ.

ಈ ವ್ಯವಸ್ಥೆಯು ನಿಮ್ಮ ಪ್ರತಿ ಚಾಲನೆಯ ಅಂಕಿ-ಅಂಶಗಳು ಮತ್ತು ಪ್ರಯಾಣದ ಶೈಲಿಯನ್ನು ಸ್ವಯಂಚಾಲಿತವಾಗಿ ದಾಖಲಿಸುತ್ತದೆ, ಇದರಿಂದ ಸವಾರರು ತಮ್ಮ ಪ್ರತಿಯೊಂದು ಪ್ರಯಾಣದ ವಿವರಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಸವಾರಿಯ ಕಾರ್ಯಕ್ಷಮತೆ ಹಾಗೂ ನಿಯಂತ್ರಣವನ್ನು ಹೆಚ್ಚಿಸಲು, ಅವೋರ್ ಇಎಕ್ಸ್ ಮಾದರಿಯಲ್ಲಿ ಅಪೆಕ್ಸ್ (ಅತ್ಯುನ್ನತ ಪರ್ಫಾರ್ಮೆನ್ಸ್ ಮೋಡ್) ಮತ್ತು ಸಿಫ್ಟ್ (ಪವರ್‌ ನಿಯಂತ್ರಣಕ್ಕೆ ನೆರವಾಗುವ ಮ್ಯಾನುಯಲ್ ಗೇರ್ ಮೋಡ್) ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಇದರೊಂದಿಗೆ ತಕ್ಷಣದ ರಿಯಾಕ್ಷನ್‌ ಗಾಗಿ ಎ ಆರ್ ಎಸ್ (ಅಡಾಪ್ಟಿವ್ ರೈಡರ್ ಸಿಸ್ಟಮ್) ಮತ್ತು ಬೈಕ್‌ ನ ಹ್ಯಾಂಡ್ಲಿಂಗ್ ಹಾಗೂ ಸಮತೋಲನವನ್ನು ಹೆಚ್ಚಿಸುವ ಡ್ರೈವ್ ಲಿಂಕ್ ಆರ್ಮ್ ಪವರ್‌ ಟ್ರೇನ್ ತಂತ್ರಜ್ಞಾನವನ್ನು ನೀಡಲಾಗಿದೆ.

ದೈನಂದಿನ ಬಳಕೆಯ ಸೌಕರ್ಯಕ್ಕಾಗಿ ಬೈಕ್‌ ನಲ್ಲಿ ಫ್ಲೆಕ್ಸ್ ಚಾರ್ಜ್ ಅಡಿಯಲ್ಲಿ 1500ವ್ಯಾಟ್ ಆನ್‌ ಬೋರ್ಡ್ ಫಾಸ್ಟ್ ಚಾರ್ಜರ್ ನೀಡಲಾಗಿದೆ. ಇದರಿಂದ ಸಾಮಾನ್ಯ ಸಾಕೆಟ್‌ ಗಳ ಮೂಲಕವೇ ಎಲ್ಲಿ ಬೇಕಾದರೂ ಸುಲಭವಾಗಿ ಚಾರ್ಜ್ ಮಾಡಬಹುದು. ಇನ್ನು ಕಂಪನಿಯ ಪೇಟೆಂಟ್ ಪಡೆದ ಸ್ಪ್ಲಿ ಟ್ ಪ್ಯಾಕ್ ಎನರ್ಜಿ ವಿನ್ಯಾಸವು ತೂಕದ ಸಮತೋಲನ ಮತ್ತು ತಾಪಮಾನ ನಿಯಂತ್ರಣವನ್ನು ಉತ್ತಮವಾಗಿ ನಿರ್ವಹಿಸುತ್ತದೆ. ಪಾರ್ಕಿಂಗ್ ಮಾಡಲು ಹಾಗೂ ಕಿರಿದಾದ ಜಾಗಗಳಲ್ಲಿ ಬೈಕ್ ತಿರುಗಿಸಲು ನೆರವಾಗಲು ಪಿಎಎಂ+ ಪಾರ್ಕ್ ಅಸಿಸ್ಟ್ ಸೌಲಭ್ಯವನ್ನೂ ನೀಡಲಾಗಿದೆ.ಸವಾರರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಗೈಡ್-ಮೀ-ಹೋಮ್ ಲೈಟ್ಸ್‌, ಆಟೋ ಇಂಡಿಕೇಟರ್ ಕಟ್-ಆಫ್, ಅಹೋಯ್! ವೆಲ್ಕಮ್ ಲೈಟ್ಸ್, ಮತ್ತು ವಿಶಿಷ್ಟ ಶೈಲಿಯ ಬೀಕಾನ್ ಟ್ಯಾಂಕ್ ಲೈಟಿಂಗ್ ನೀಡಲಾಗಿದೆ. ಬೈಕ್‌ ನ ವಿಶಾಲವಾದ ಎರ್ಗೋ ಫಿಟ್ ರೈಡಿಂಗ್ ವಿನ್ಯಾಸವು ಪ್ರತಿದಿನದ ಕಚೇರಿ ಪ್ರಯಾಣಕ್ಕೂ ಮತ್ತು ದೀರ್ಘ ದೂರದ ಸವಾರಿಗೂ ಗರಿಷ್ಠ ಆರಾಮದಾಯಕ ಅನುಭವ ನೀಡುತ್ತದೆ.

ಭಾರತೀಯ ರಸ್ತೆಗಳಿಗೆ ಸೂಕ್ತ ಹಾಗೂ ವಿಶ್ವಾಸಾರ್ಹ

ಭಾರತದ ಕಠಿಣ ರಸ್ತೆ ಪರಿಸ್ಥಿತಿಗಳಿಗೆ ತಕ್ಕಂತೆ ಅವೋರ್ ಎಲೆಕ್ಟ್ರಿಕ್ ಇಎಕ್ಸ್ ಅನ್ನು ಅತ್ಯುನ್ನತ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳೊಂದಿಗೆ ನಿರ್ಮಿಸಲಾಗಿದೆ. ಕಂಪನಿಯು ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ತರುವ ಮೊದಲು 1,00,000 ಕಿ.ಮೀಗೂ ಹೆಚ್ಚು ರಸ್ತೆ ಪರೀಕ್ಷೆ, 2,500ಕ್ಕೂ ಹೆಚ್ಚು ಗಂಟೆಗಳ ಡೈನಮೊಮೀಟರ್ ಪರೀಕ್ಷೆ ಹಾಗೂ ಭಾರತದ ವಿವಿಧ ವಾತಾವರಣಗಳಲ್ಲಿ ವ್ಯಾಪಕವಾದ ಚಾಲನಾ ಪರೀಕ್ಷೆಗಳನ್ನು ನಡೆಸಿದೆ. ಈ ಬೈಕ್ ಭಾರತ ಸರ್ಕಾರದ ನಿಯಮಾವಳಿಗಳಿಗೆ ಸಂಪೂರ್ಣವಾಗಿ ಬದ್ಧವಾಗಿದ್ದು, ಇದರ ಪ್ಲಾಟ್‌ ಫಾರ್ಮ್ AIS 156 ಮತ್ತು AIS 038 ಅತ್ಯುನ್ನತ ಸುರಕ್ಷತಾ ಮಾನದಂಡಗಳ ಪ್ರಮಾಣೀಕರಣ ಪಡೆದಿದೆ. ಗ್ರಾಹಕರ ದೀರ್ಘಕಾಲದ ನಂಬಿಕೆಗಾಗಿ ಬೈಕ್‌ ನ ಬ್ಯಾಟರಿ ಮೇಲೆ 5 ವರ್ಷ ಅಥವಾ 60,000 ಕಿ.ಮೀ ವರೆಗೆ ಸಂಪೂರ್ಣ ವಾರಂಟಿ ಒದಗಿಸಲಾಗುತ್ತಿದೆ.

Avor Electric : ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ ಆಧಾರ

ಅವೋರ್ ಇಎಕ್ಸ್ ಮೋಟಾರ್‌ ಸೈಕಲ್, ಕಂಪನಿಯ ಸ್ವಂತ ಅವೋರ್ ಸೋರ್ಸ್ ತಂತ್ರಜ್ಞಾನ ಹಾಗೂ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಬೈಕ್‌ ಗಳಿಗಾಗಿಯೇ ವಿನ್ಯಾಸಗೊಳಿಸಲಾದ ಎವಿಆರ್ ವಾಹನ ಪ್ಲಾಟ್‌ ಫಾರ್ಮ್ ಆಧಾರದಲ್ಲಿ ನಿರ್ಮಾಣಗೊಂಡಿದೆ.

ಅಹಮದಾಬಾದ್‌ ನಲ್ಲಿರುವ ತನ್ನ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕಂಪನಿಯು ವಾಹನದ 9 ಪ್ರಮುಖ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಸ್ವತಃ ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ ಬ್ಯಾಟರಿ ಮ್ಯಾನೇಜ್‌ ಮೆಂಟ್ ಸಿಸ್ಟಮ್ (ಬಿಎಂಎಸ್), ಬ್ಯಾಟರಿ ಪ್ಯಾಕ್, ಮೋಟಾರ್, ಮೋಟಾರ್ ಕಂಟ್ರೋಲರ್, ಪವರ್ ಕಂಟ್ರೋಲ್ ಮಾಡ್ಯೂಲ್, ಡಿಸಿ- ಡಿಸಿ ಕನ್ವರ್ಟರ್, ಆನ್‌ ಬೋರ್ಡ್ ಫಾಸ್ಟ್ ಚಾರ್ಜರ್, ಡಿಸ್ಪ್ಲೇ ಸಿಸ್ಟಮ್ ಮತ್ತು ಸ್ವಂತ ಆಪರೇಟಿಂಗ್ ಸಿಸ್ಟಮ್‌ ಗಳು ಸೇರಿವೆ.

ಕಂಪನಿಯು 120ಕ್ಕೂ ಹೆಚ್ಚು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಭಾರತದ ಅತ್ಯಂತ ಸಮಗ್ರ ಸ್ವದೇಶಿ ಇವಿ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ರೂಪಿಸಿದೆ. ಈ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳ ನೇರ ಸಂಯೋಜನೆಯು ವಾಹನದ ಗುಣಮಟ್ಟ, ನಂಬಿಕೆ ಹಾಗೂ ವೇಗದ ಆವಿಷ್ಕಾರಕ್ಕೆ ಹಾದಿಮಾಡಿಕೊಟ್ಟಿದೆ.

ಈ ಕುರಿತು ಅವೋರ್ ಎಲೆಕ್ಟ್ರಿಕ್ ಸಂಸ್ಥಾಪಕರಾದ ಪ್ರಿಯಾಂಕ್ ರಖೋಲಿಯಾ ಅವರು, “ನಾವು ಇಎಕ್ಸ್ ಬೈಕ್ ಅನ್ನು ಮಾರುಕಟ್ಟೆಗೆ ತರುವ ಮುನ್ನ ಮೂರು ವರ್ಷಗಳ ಕಾಲ ಸಂಶೋಧನೆ, ಅಭಿವೃದ್ಧಿ ಮತ್ತು ಕಠಿಣ ಪರೀಕ್ಷೆಗಳಿಗೆ ಒಳಪಡಿಸಿದ್ದೇವೆ. ಭಾರತದಲ್ಲೇ ಅಭಿವೃದ್ಧಿಪಡಿಸಿದ ಎಲೆಕ್ಟ್ರಿಕ್ ತಂತ್ರಜ್ಞಾನದ ಗಡಿಗಳನ್ನು ಹಿಗ್ಗಿಸುತ್ತಾ, ಜಾಗತಿಕ ಮಟ್ಟದ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುವುದು ನಮ್ಮ ಗುರಿ. ಭಾರತದ ಪ್ರತಿಯೊಬ್ಬರಿಗೂ ವಿಶ್ವ ದರ್ಜೆಯ ಎಲೆಕ್ಟ್ರಿಕ್ ವಾಹನಗಳನ್ನು ತಲುಪಿಸುವ ನಮ್ಮ ಪ್ರಯಾಣಕ್ಕೆ ಇಎಕ್ಸ್ ಬೈಕ್ ಬಿಡುಗಡೆ ಒಂದು ಹೊಸ ಮುನ್ನುಡಿ” ಎಂದು ಹೇಳಿದರು.

ಆಕರ್ಷಕ ಬಣ್ಣಗಳು ಮತ್ತು ಮಾದರಿಗಳು

ಸೌಂದರ್ಯ ಮತ್ತು ವಿನ್ಯಾಸದ ವಿಚಾರದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಅವೋರ್ ಇಎಕ್ಸ್, ಇವಿ ವಿಭಾಗದಲ್ಲೇ ಮೊದಲ ಬಾರಿಗೆ ಪ್ರೀಮಿಯಂ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯನ್ನು ಪರಿಚಯಿಸಿದೆ.

ಇಎಕ್ಸ್ 2ಎಸ್ ಮತ್ತು ಇಎಕ್ಸ್ 2 ವೆರಿಯೆಂಟ್‌ ಗಳು ಸ್ಟಾರ್‌ಲಿಟ್ ಬ್ಲೂ, ಮೀಟಿಯಾರ್ ರೆಡ್ ಮತ್ತು ಸ್ಟೆಲ್ಲಾರ್ ಬ್ಲ್ಯಾಕ್ ಎಂಬ ಮೂರು ಆಕರ್ಷಕ ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿರಲಿವೆ.

ಇಎಕ್ಸ್ 1 ವೆರಿಯೆಂಟ್, ಸ್ಟಾರ್‌ಲಿಟ್ ಬ್ಲೂ, ಮೀಟಿಯಾರ್ ರೆಡ್ ಮತ್ತು ಸ್ಟೆಲ್ಲಾರ್ ಬ್ಲ್ಯಾಕ್ ಎಂಬ ಮೂರು ಸಿಂಗಲ್-ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ಬುಕಿಂಗ್ ಮತ್ತು ಲಭ್ಯತೆ

ಬೈಕ್‌ ನ ಅಧಿಕೃತ ಬುಕಿಂಗ್‌ ಗಳು ಕಂಪನಿಯ ವೆಬ್‌ ಸೈಟ್‌ ನಲ್ಲಿ ತಕ್ಷಣವೇ ಪ್ರಾರಂಭಗೊಂಡಿದ್ದು, ರೂ. 799 ನೀಡಿ ಬುಕ್ ಮಾಡಬಹುದಾಗಿದೆ. ಬುಕಿಂಗ್ ಮಾಡಿದ 2 ತಿಂಗಳ ನಂತರ ಗ್ರಾಹಕರಿಗೆ ಬೈಕ್ ವಿತರಣೆ ಆರಂಭವಾಗಲಿದೆ. ಬರುವ ಮುಂದಿನ ತಿಂಗಳಿನಿಂದ ದೇಶದ ಪ್ರಮುಖ ನಗರಗಳ ಶೋರೂಮ್‌ಗಳಲ್ಲಿ ಅವೋರ್ ಇಎಕ್ಸ್ ಪ್ರದರ್ಶನಕ್ಕೆ ಲಭ್ಯವಿರಲಿದೆ.

ಹೆಚ್ಚಿನ ಮಾಹಿತಿಗಾಗಿ ಅವೋರ್ ಎಲೆಕ್ಟ್ರಿಕ್‌ ನ ಅಧಿಕೃತ ವೆಬ್‌ ಸೈಟ್ ಹಾಗೂ ಇನ್‌ಸ್ಟಾ ಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ಪುಟಗಳಿಗೆ ಭೇಟಿ ನೀಡಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 info@kalpa.news   
Kalahamsa Infotech private limitedKalpa News Advertising Disclaimer

The post ಅವೋರ್ ಎಲೆಕ್ಟ್ರಿಕ್‌ನ ಮೊದಲ ಇ-ಬೈಕ್ ‘ಇಎಕ್ಸ್’ ರೂ.1.25 ಲಕ್ಷಕ್ಕೆ ಬಿಡುಗಡೆ appeared first on kalpa.news.

ನಿಮ್ಮ ಪ್ರತಿಕ್ರಿಯೆ ಏನು?

ಇಷ್ಟ ಇಷ್ಟ 0
ಇಷ್ಟವಿಲ್ಲ ಇಷ್ಟವಿಲ್ಲ 0
ಪ್ರೀತಿ ಪ್ರೀತಿ 0
ತಮಾಷೆ ತಮಾಷೆ 0
ವಾಹ್ ವಾಹ್ 0
ದುಃಖ ದುಃಖ 0
ಕೋಪಗೊಂಡ ಕೋಪಗೊಂಡ 0
mgdevs

test something

ಕಾಮೆಂಟ್‌ಗಳು (0)

User